ಕೀರ್ತನೆ - 1224     
 
ಸುಖವಾದಡೆ ಎನ್ನಿಂದಾಯಿತೆಂಬರು ದುಖವಾದರೆ ದೈವ ಮಾಡಿತೆಂಬರು ಸಖಕೆ ತಾನಾರೊ ದಃಖಕೆ ತಾನಾರೊ ವಿಕಲನಾಗಿ ಕೆಡಬೇಡ ಮನುಜಾ ರುಕುಮಿಣಿಯರಸು ಪುರಂದರ ತಾನೇ ಸುಖ ದುಃಖವ ಮಾಡಿಸುವನು ಕಾಣಿರೋ.