ಕೀರ್ತನೆ - 1223     
 
ಅನುಕೂಲವಿಲ್ಲದ ಸತಿಯ ವರ್ಜಿಸಬೇಕು ವಿನಯದಿ ಗುರು ಹಿರಿಯರ ಪೂಜಿಸಬೇಕು ಮನಕೆ ಬಾರದ ಠಾವು ಬಿಟ್ಟು ತೊಲಗಬೇಕು ವನಜನಾಭನ ದಾಸರ ಸಂಗವಿರಬೇಕು ನೆನೆಯುತಲಿರಬೇಕು ಪುರಂದರವಿಠಲನ.