ಕೀರ್ತನೆ - 1220     
 
ಕುಡಿಯ ಕೊಟ್ಟ ಅಮೃತದಂತಹ ನೊರೆಹಾಲನೊಲ್ಲದೆ ಬಟ್ಟಲೊಳಗೆ ತಿರಿತಿಂಬರು ಕೆಲರು ಪಟ್ಟವಾಳಿಯ ಮುಂದೆ ಅರಿವೆಯನೆ ಬಯಸುವರು ಈ ಭ್ರಷ್ಟರಿಗೇನೆಂಬೆ(ನೊ) ಪುರಂದರವಿಠಲ.