ಕೀರ್ತನೆ - 1218     
 
ಗಂಡಮಾಡಿದ ಪಾಪ ಹೆಂಡತಿಗಿಲ್ಲ ಹೆಂಡತಿ ಮಾಡಿದ ಪಾಪ ಗಂಡಗುಂಟು ಹೆಂಡತಿ ಮಾಡಿದ ಪುಣ್ಯ ಗಂಡಗಿಲ್ಲ ಗಂಡ ಮಾಡಿದ ಪುಣ್ಯ ಹೆಂಡತಿಗುಂಟು ಜೀವ ಜೀವರ ಭೇದ ನೀನೆ ಉದ್ಧರಿಸಯ್ಯ ಪುರಂದರವಿಠಲ.