ಕೀರ್ತನೆ - 1217     
 
ಹಸಿವಾಯಿತೇಳು ದೇವರ ತೊಳೆ ಎಂಬರು ಹಸನಾಗಿ ಮನಮುಟ್ಟಿ ಪೂಜೆಯ ಮಾಡರು ಹಾಸಿ ಹಾವಿನ ಬುಟ್ಟಿಯಂತೆ ಮುಂದಿಟ್ಟುಕೊಂಡು ವಸುಧೆಯೊಳಗೆ ಉರಗಗಾರನ ಆಟವಾಡುವರಯ್ಯ ಪರಧನ ಪರಸತಿ ಪರದ್ರವ್ಯಕ್ಕೆರಗುವರು ತೊರೆಯದಿದ್ದರೆ ದುರಿತ ಪೋಗುವುದೆ? ಸರುವವೆಲ್ಲವ ತೊರೆದು ಹರಿಯ ಧ್ಯಾನವ ಮಾಡಿದರೆ ವರವ ಕೊಡುವ ನಮ್ಮ ಪುರಂದರವಿಠಲ.