ಕೀರ್ತನೆ - 1214     
 
ಮಾನವರು ಕೃತಯುಗದಿ ಮಾಡಬೇಕು ತಪವನು ಜ್ಞಾನಸಾಧನ ಬೇಕು ತ್ರೇತಾಯುಗದಿ ಏನೆಂಬ ದ್ವಾಪರದಿ ಯಜ್ಞಸಾಧನ ಬೇಕು ಗಾನ ದಾನ ಬೇಕು ಕಲಿಯುಗದಿ ಪುರಂದರವಿಠಲ.