ಕೀರ್ತನೆ - 1198     
 
ಮಧ್ಯಾಂಗುಲಿಯ ಮೇಲೆ ಮಣಿಸರವಿಟ್ಟು ಬದ್ಧ ಅಂಗುಟವೆಣಿಸಬೇಕು ತಿದ್ದಿ ಅಂಗುಲಿ ಪಂಚ ಬೊಗ್ಗಿಸಿ ಇರಬೇಕು ಭದ್ರವಾಗಿ ನಿಲಿಸಿ ನೀರ ಸೋರದೆ ಗಾಯತ್ರಿಯ ಭದ್ರವಾಗಿ ನಿಲಿಸಿ ನೀರು ಸೋರದೆ ಗಾಯತ್ರಿಯ ಬುದ್ಧಿ ಪೂರ್ವಕದಿಂದ ಗೆಯ್ಯುತಲಿರಬೇಕು ಮುದ್ದು ಮೂರುತಿ ನಮ್ಮ ಪುರಂದರವಿಠಲನ್ನ ಎದ್ದೆದ್ದು ನೋಡುವ ಬಗೆ ಕಾಣಲುಬೇಕು