ಕೀರ್ತನೆ - 1196     
 
ಬಿಡು ಮನುಜಾ ಈ ಜಪವು ಸಿದ್ಧಿಗೆ ಬಾರದು ತೊಡೆಯ ಕೆಳಗೆ ಕೈ ಹಿಂದೆ ಮುಂದೆ ಕೈ ಚಾಚಿ ಬಿಡುತ ಮಂತ್ರಾರ್ಥ ನೋಡದಲೆ ಅಡಿಗಡಿಗೆ ಜಪವ ಮಾಡೆ ದೈತ್ಯರಿಗೆ ಅಹುದಯ್ಯ ಒಡೆಯ ಪುರಂದರವಿಠಲನನೊಲಿಸ ಬೇಕಾದರೆ ಹಿಡಿಯೊ ಈ ಪರಿ ಹೇಳಿದ ವಚನ ತತ್ತ್ವಗಳ