ಕೀರ್ತನೆ - 1177     
 
ಹತ್ತೈದು ಗಳಿಗೆಯ ಮೇಲೆ ಮತ್ತೈದು ಬರಲೆದ್ದು ಚಿತ್ತಜನೈಯ್ಯನ ಚಿತ್ತದಿ ಧೇನಿಸಿ (ಧ್ಯಾನಿಸಿ) ಅತ್ತಲುದಯಕ್ಕೆ ಗಳಿಗೆ ಎರಡರಲ್ಲಿ ಎದ್ದು ನಿತ್ಯ ಸ್ನಾನವ ಮಾಡಿ ಆದಿತ್ಯಗರ್ಥ್ಯವನೀಯೆ ಉತ್ತಮ ಜನಕೆಲ್ಲ ಮೆತ್ತಿದ ಪಾಪಗಳನ್ನು ಉತ್ತರಿಸುವೆನೆಂದ ಪುರಂದರವಿಠಲ.