ಕೀರ್ತನೆ - 1173     
 
ನೀರ ಮೇಲಣ ಗುಳ್ಳೆಯಂತೆ ಈ ದೇಹ ನಿಮಿಷವೂ ನಿಮಿಷಾರ್ಧವೊ ಕಾಣಬಾರದು ಹಾರಲೇಕೆ ಪರಧನಕೆ ಪರಸತಿಗೆ? ಹಾರುವನ ಕಟ್ಟ ಬೇಕು ಹಾರುವನು (ನ) ಕುಟ್ಟಬೇಕು ಹಾರುವರನ ಕಂಡರೆ ಕೆನ್ನೆಯ ಮೇಲೆ ಹಾಕಬೇಕು ಹಾರಲೇಕೆ ಪರಧನಕೆ ಪರಸತಿಗೆ ಊರೊಳಗೆ ಐದು ಮಂದಿ ಹಾರುವರೈದಾರೆ ! ನೀನೆ ವಿಚಾರಿಸೊ ಪುರಂದರವಿಠಲ.