ಕೀರ್ತನೆ - 1172     
 
ಧ್ವಜ ವಜ್ರಾಂಕುಶ ರೇಖಾಂಕಿತ ಹರಿಪಾದಾಂ- ಬುಜವ ಸೇವಿಸುವ ಅಜ-ಭವರ ಭಾಗ್ಯವ ನೋಡೊ ತ್ರಿಜಗವಂದ್ಯನ ಪಾಡೊ ದುರ್ಜನರ ಸಂಗವ ಬಿಡೊ ಕುಜನಮತವನು ಸುಡೊ ಗಜೇಂದ್ರನ ಕಾಯ್ದ ಸಿರಿ ಕೃಷ್ಣನ ಧ್ಯಾನ ಮಾಡೊ ಪುರಂದರವಿಠಲನ ಬಿಡದೆ ಕೊಂಡಾಡೊ.