ಕೀರ್ತನೆ - 1171     
 
ಸುಖಕೆ ತಾನಾರೊ ದುಃಖಕೆ ತಾನಾರೊ ಸುಖ ದುಃಖವೆರಡೂ ಶ್ರೀಹರಿಯ ಅಧೀನವಲ್ಲದೆ ಸಾಗರ ಸಡ್ಡೆಯ ಮಾಡಿ ಧರೆಯ ಕೂರಿಗೆ ಮಾಡಿ ಶಿವ ಬ್ರಹ್ಮ ಎಂಬ ಎರಡೆತ್ತ ಹೂಡಿ ಊಳುವಾತ ಇಂದ್ರನು ಬೆಳೆಸಿದ ಚಂದ್ರನು ಕಳೆಯ ತೆಗೆಯುವವ ಯಮಧರ್ಮನು ಬತ್ತಿದಾ ಬೆಳಸನು ಕೊಯ್ದು ತಾನೊಯ್ದನು ದುಃಖವೇತಕೆ ಬಾರೊ ಪುರಂದರವಿಠಲ.