ಕೀರ್ತನೆ - 1170     
 
ನೀರಡಿಸಿ ಜಾಹ್ನವಿಯ ತೀರದಲಿ ಬಂದು ಬಾವಿಯ ನೀರ ಕುಡಿಯುವ ಮಾನವರುಂಟೆ? ಹರಿಯ ಸಿರಿಚರಣವಿರಲು ಬರಡು ದೈವಗಳನ್ನೇಕೆ ಭಜಿಸುವೆ ಮನವೆ? ಸಿರಿರಮಣ ಬೇಲೂರು ಚೆನ್ನಿಗರಾಯ ಪುರಂದರವಿಠಲನಿರಲು ಬರಡು ದೈವಗಳನ್ನೇಕೆ ಭಜಿಸುವೆ.