ಕೀರ್ತನೆ - 1167     
 
ಬಿಲ್ಲು ಮುರಿಯೊ ದನುಜರ ಹೊಯ್ಯೋ, ಕೃಷ್ಣ । ಮಲ್ಲ ಬಂದನು ಕಾಣೋ ಮಧುರಿಗೆ | ಹುಲ್ಲ ಮಲ್ಲರ ತಿವಿಯೊ । ಖುಲ್ಲ ಮಾನವರ ಕೊಲ್ಲೊ, ರಂಗ । ಮಲ್ಲ ಬಂದನು ಕಾಣೋ ಮಧುರಿಗೆ | ಬಲ್ಲಿದ ನಮ್ಮ ಪುರಂದರವಿಠಲ । ಬಲ್ಲಿದ ಕಾಣೋ, ಊರ್ಜಿತ ಕಾಣೋ ಮಲ್ಲ ಕೃಷ್ಣ