ಕೀರ್ತನೆ - 1164     
 
ರತಿ ಪತಿ ಪಿತನೆಂತೆಂಬ ಚೆಲುವ ನೀನುಳಿದು | ಕ್ಷಿತಿಯಲಿ ವರಾಹರೂಪ ಧರಿಸುವರೇನೊ ಹರಿಯೆ | ಸಿರಿ-ಭೂದೇವಿಯರು ಸತಿಯರಾಗಿರಲು | ಅಡವಿಯೊಡಾಳುವ (ಅಡವಿಯೊಳಾಡುವ) ಕರಡಿಯ ಮಗಳನು ಮೆಚ್ಚುವರೆ?! ಪುರಾಣ ಪುರಷೋತ್ತಮನೆ ನೀನಮೃತಕೆ | ನಾರಾಯಣಿಯಾಗಿ ಮೋಹಿಪರೆ? । ಜಗಕಾಶ್ಚರ್ಯ ಚಾರಿತ್ರ್ಯವುಂಟೆ, ಎಲೆ ದೇವ | ಪುರಂದರವಿಠಲ ದೇವರ ದೇವ । ಶರಣಾಭರಣವೆ ನಿನಗೆ ನಾನು ನಮೋ ಎಂಬೆ