ಕೀರ್ತನೆ - 1162     
 
ಬೆಣ್ಣೆಯ ಬಟ್ಟಲ ಕಂಡು ಒರಳ ಮೇಲೇರಿ ಕೊಂಡು । ಚಿಣ್ಣರಿಗೆ ತುತ್ತೀವ ಠಕ್ಕುತನವೇನೆಂದು । ಕಣ್ಣ ಝೇಂಕರಿಸುತ್ತ ಕಂಜಾಕ್ಷ ಎಂದು ಗೋಪಿ । ದೊಣ್ಣೆಯ ಕೊಂಡಟ್ಟಿದಳಪ್ರತಿಮ ಪ್ರಭಾವನ್ನ । ಹೆಣ್ಣೇನು ನೋಂತಳು ಪುರಂದರವಿಠಲನ | ಕಣ್ಣಿಯಲ್ಲಿ ಕಟ್ಟಿ ಆಳಿದಳು ವಿಶ್ವ ಕಾಯನ