ಕೀರ್ತನೆ - 1159     
 
ನಖದ ಬೆರಳು ಚಂದ್ರ ಸೂರ್ಯರ ಸೋಲಿಸಿ ಮೆರೆಯುತಿದೆ ನೋಡು | ಮುಖದಧಿಪತಿಯೆ ನಿನ್ನ ಸರ್ವಾಂಗದ ಕಾಂತಿ ಲಾವಣ್ಯಗಳನೆ ಕಂಡು | ಸುಖಿಸಿದರಂತವರು ನಿನ್ನೊಡನೆ ಇದ । ನಿಖಿಳ ಜಗತ್ಕಾರಣ ನೀನೆ ಬಲ್ಲೆ | ಮಕರಕುಂಡಲಾಭರಣವೆಸೆಯೆ | ವಿಖನಸಾರ್ಚಿತ ಶ್ರೀ ಪುರಂದರವಿಠಲರಾಯ