ಕೆಲವರು ಕೆಂದಾವರೆ ಹಾಸಿ ಪವಡಿಸೆನೆ ಪವಡಿಸುವೆ ।
ಕೆಲವರುಪಬರ್ಹಣವ ಈಯಲು ನೀನಾನುವೆಯೊ ।
ಕೆಲವರು ಕೇತಕಿ ಚಾಮರ ಬೀಸಲು ನೀನಲಿವೆ |
ಕೆಲವರು ಪಾದಪದುಮಗಳ ಒತ್ತಲು ನೀನೊಲಿವೆ |
ಕೆಲವರು ತೋಳ್ಕೊಡೆ ಮೈಮೊಗವೆರಸಿ ಅಪ್ಪಲು ಮರಳಿ ಅಪ್ಪುವೆ |
ಕೆಲವರು ಕೊಂಬು ಕೊಳಲು ತುತ್ತೂರಿ ಮೌಲ್ಯಗಳ ಬಾರಿಸೆ ನೀನೊಲಿವೆ |
ಕೆಲವರು ಮಂದ್ರ ಮಧ್ಯಮ ತಾರದಿ ಅನೇಕ ರಾಗಗಳ ಪಾಡೆ |
ಝಣ ಝಣ ಝಣರೆಂದುಗ್ಗಡಿಸೆ ಕೆಲವರು |
ಧಿಮ್ ಧಿಮ್ ಧಿಮ್ ಧಿಮಿಕೆನುತಲಿ ಕೆಲವರು ನೃತ್ಯವಾಡೆ ಸುಖಿಸುವೆ ।
ಜಲಜಾಕ್ಷ ಏನಿನ್ನಿವರ ಪುಣ್ಯವೆಂತು ಬಣ್ಣಿಪೆ ।
ಹಲಧರನು ನಿನ್ನೊಡನೆ ನಿನ್ನೊಳಾಡುವ ಗೋಪ ಗೋಪಿ
ಗೋಕುಲಿಕೆ ನಮೋ ಪುರಂದರವಿಠಲ |
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಕೃಷ್ಣಲೀಲೆ