ಕೀರ್ತನೆ - 1153     
 
ಪೊಂಬಟ್ಟೆಯ ಮೇಲೆ ಕಂಚಿಯ ದಾಮ ಗುಡಿಗಟ್ಟಿ । ಜಂಬು-ಚೂತದೆಳದಳಿರುಗಳ ಮುಕುಟ ವೇಲೆ ಕಟ್ಟಿ । ಕೊಂಬು ಕೊಳಲು ತುತ್ತೂರಿ ಮೌರ್ಯಗಳು | ಭುಂ ಭುಂ ಭುಂ ಭುಂ ಝಂ ಝಂ ಝಂ ಝಂ ॥ ಎಂಬ ರಾಮಕೃಷ್ಣ ಗೋಪರುಗಳ | ಸಂಭ್ರಮ ಸುರರ ಸೋಲಿಸಿತು ಜಂಭ ಭೇದಿ ಸ್ವ । ಯಂಭುವ ಮುಖ್ಯ ಸುರವಂದಿತ ತಿರು-| ವೆಂಗಳಪ್ಪ ಪುರಂದರವಿಠಲರಾಯ ।