ಕೀರ್ತನೆ - 1146     
 
ಅಂಗುಟ ಮಾತುರವೆಂಬ ಮೂರುತಿ ಪರೀಕ್ಷಿಸಿತು ಕಂಡು ಕಂಡರಸಿಕೊಂಬ ಕಮನೀಯ ಮೂರುತಿಯು । ಆತುಮ ಮೂರುತಿ ಅಂತರಾತುಮ ಮೂರುತಿಯು ಬಿಂಬ ಮೂರುತಿ ಜೀವದಾಕಾರ ಮೂರುತಿಯು । ಅಣುರೇಣುವೆಂಬ ಚಿನ್ಮಯ ಮೂರತಿಯು | ಮುನಿಗಳ ಹೃದಯದೊಳು ಮಿನುಗುವ ಮೂರುತಿಯು । ಬೊಮ್ಮಗಾದಾ ಮೂರುತಿಯು ತಾನೆಲ್ಲಿಂದೆಲ್ಲಿ ಬಂದಿತು । ಅಮರರಾಭರಣ ತಾನೆಲ್ಲಿಂದೆಲ್ಲಿಗೊದಗಿತೊ ಎನಗೆ ಪ್ರಸನ್ನನಾದ ಉಡುಪಿಯ ಕೃಷ್ಣ ಮೂರುತಿ । ಪುರಂದರವಿಠಲನ ಒಲುಮೆಯೆಂತೊ