ಕಾಳಿಂದಿಯ ಮಡುವಿನಲಿ ಧಮುಕಿ
ಕಾಳಿಂಗನ ಫಣಿ ಫೂತ್ಕಾರ ಮೇಲುಸುರದನ್ನ
ಭಾಮೆಯೆಳಸಿರಲು ತೋಂಧಿಗಿಧಿಗಿ ಧಾಂಧಾಂಮಿ
ಗೊಳಿಸಿ ಅಜ ಮೃದಂಗವ ತಟ್ಟೆ ಇಂದುಧರ
ತಾಳ ಪಿಡಿದು ಘಟ್ಟಿಸಲು ತಥಂತನನವೆಂದು
ಸ್ವರವೆತ್ತಿ ನಾರದ ಪಾಡಲು ಕುಣಿ ಎದೆಯಲ್ಲಿ ಕೃಷ್ಣ
ಎಂದವಗೆ ವರವಿತ್ತು ಮನ್ನಿಸಿ ಪೂಜೆಗೊಂಡು
ಗೋವಿಂದ ಗೋಪಾಲಕರನೊಲಿಸಿ
ಗೋವಳರಂಕದರ್ಪ ಕೇಳಿ ನಂದ ಗೋಪಿಯರಿ-
ಗಾನಂದ ಅಭಿನವ ಈತ ಪುರಂದರವಿಠಲ.
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಕೃಷ್ಣಲೀಲೆ