ಕೀರ್ತನೆ - 1142     
 
ಆವ ತೀರಥದಲಿ ಮುಳುಗಿದೆನೊ ನಾ- ನಾವ ಕ್ಷೇತುರಗಳ ಮೆಟ್ಟಿದೆನೊ ನಾ-। ನಾವ ಕ್ರತುವ ನೆರೆ ಮಾಡಿದೆನೊ ನಾ- ನಾವ ದೇವತೆಗಳ ಭಜಿಸಿದೆನೊ । ದೇವ ಪುರಂದರವಿಠಲನ | ಪಾವನ ಮೂರ್ತಿಯ ಕಂಡೆ ನಾನು