ಕೀರ್ತನೆ - 1139     
 
ಕೋಗಿಲೆಯಂತೆ ಕೂಗುವೆಯೊಮ್ಮೆ | ಗಿಳಿಯಂತೆ ಮಾತನಾಡುವೆಯೊಮ್ಮೆ | ತುಂಬಿಯಂತೆ (ನಲಿದು), ಪಾಡುವೆಯೊಮ್ಮೆ । ನವಿಲಿನಂತೆ ನಲಿದಾಡುವೆಯೊಮ್ಮೆ । ಒಮ್ಮೆ ಕೊಕ್ಕರನಂತೆ ಕೊಕ್ಕಿ ಒಮ್ಮೆ ಗೂಳಿಯಂತೆ ಗುಟುರಿ | ಒಮ್ಮೆ ಗೋವಳನಂತೆ ಗೋಲಿಯಾಡುವೆ । ಆವ ಲೀಲೆಯೊ ಪುರಂದರವಿಠಲ