ಕೀರ್ತನೆ - 1137     
 
ಹಸುಗಳ ಕರೆವ ಧ್ವನಿ ಕರುಗಳ ಪಿಡಿದು ಬಿಡುವ ಧ್ವನಿ । ರಶನೆ-ಕಂಕಣಗಳನಿಟ್ಟ ಯಶೋದೆ ಮೊಸರ ಕಡೆವ ಧ್ವನಿ । ಪಯೋಬ್ಧಿಶಯನನ [ಒಸೆದು] ಪಾಡುವ ಧ್ವನಿ । ಸೆಳೆಮಂಚದ ಮೇಲೆ ಯೋಗನಿದ್ರೆಯೊಳಿಪ್ಪ | ಕುಸುಮಾಕ್ಷನು ಉಪ್ಪವಡಿಸಲು ಮೈಮುರಿದೆದ್ದು | ಬಂದು ಗೋಪಿಯ ನಿರಿಯ ಪಿಡಿದುಕೊಂಡು ! ಮೊಲೆಯ ಕೊಡು ಹಸಿದನೆಂದೆಂಬ ಹರಿಯನೆತ್ತಿಕೊಂಡು 1 ತೊಡೆಯ ಮೇಲಿಟ್ಟು ಹನಿವ ಮೊಲೆಯೂಡಲು । ಆಡುವ ಕೃಷ್ಣರಾಯ ಬಿಡದೆ ಭಕುತಜನರ ಸಲಹುವ | ಸುಕುಮಾರಕ ಪುರಂದರವಿಠಲ