ಕೀರ್ತನೆ - 1133     
 
ವೇದಗಳೆಂಬ ದಾವಣಿಯಲ್ಲಿ ನಾಮಗಳೆಂಬ ಮೂಗುನೇಣುಗಳಿಂದ | ಜೀವರುಗಳೆಂಬ ಎತ್ತುಗಳನೆ ಕಟ್ಟಿ ಕರ್ಮವೆಂಬ ಹೇರಹೇರಿಸಿ । ಆಡುವನು ಪುರಂದರವಿಠಲರಾಯ | ಇವನೊಬ್ಬನೆ ದೊಡ್ಡ ವ್ಯವಹಾರಿ ಕಾಣಿರೊ