ಕೀರ್ತನೆ - 1119     
 
ಹೊಡೆಮರಳಲು ಕಲಿತ ಶ್ರೀಕೃಷ್ಣನಾಗರ | ಹೆಡೆಯಂತೆ ತಲೆಯೆತ್ತಲು ಕಲಿತ ಕೃಷ್ಣ ಕಡು ಮುದ್ದು ಸುರಿವಂತೆ ನಗಲು ಕಲಿತ ಕೃಷ್ಣ ನುಡಿಯಲು ಕಲಿತ ಉಗ್ಗು ಉಗ್ಗು ಎಂದು ಕೃಷ್ಣ ಉಡಿಘಂಟೆ ಹುಲಿಯುಗರಳೆಲೆ ಮಾಗಾಯಿ | ಕೊರಳ ಪದಕ ಮುದ್ರೆ ಮೆರೆವ ಕೃಷ್ಣ | ಕಡಗ ಕಂಕಣದಿಂದ ಮೆರೆವ ಕೃಷ್ಣ | ಮಡದಿಯರೆತ್ತಿ ಮುದ್ದಾಡಿಸಲವರ ಓ । ರುಡಿಯ ಮೇಲೆದ್ದು ಕುಣಿವನು ಕೃಷ್ಣ । ಹಿಡಿಹೊನ್ನು ತಾ ಹೊನ್ನು ಗುಬ್ಬಿಯಂದದಿ ಹೆ- ಜ್ಜೆ ಹಿಡಿದು ಚಪ್ಪಳೆಯಿಕ್ಕುವನು ಕೃಷ್ಣ | ಮೃಡ ಮುಖ್ಯ ಸುರರು ಅಂಬರದಲಿ ನೋಡಿ ನೋಡಿ | ಕಡುವೊಪ್ಪಿ ತುತಿಸಿ ಹಾರೈಸುತಿರೆ ಕಡೆಗಣ್ಣಿನಿಂದ ಅವರನು ನೋಡಿ ನಲಿವ ನಮ್ಮ | ಒಡನಾಡುವ ಪುರಂದರವಿಠಲ ಗೋಪಾಲಕೃಷ್ಣ