ಕೀರ್ತನೆ - 1117     
 
ಮಂದಗಿರಿಯ ಕಡೆದ ತೋಳೊ-ಕೃಷ್ಣ ಸಿಂಧುವನಂಬಿನ ಮನೆಗೆ ತಂದ ತೋಳೊ-ಕೃಷ್ಣ | ಬಂದಿ ಬಾಹು ಬಳೆಯನಿಟ್ಟ ತೋಳೊ-ಕೃಷ್ಣ । ಇಂದ್ರಾದಿಗಳಾಶ್ರಯಿಸುವ ತೋಳೊ-ಕೃಷ್ಣ | ಚಂದನ ಕುಂಕುಮ ಕಸ್ತೂರಿ ಇಟ್ಟ ತೋಳೊ-ಕೃಷ್ಣ | ಇಂದಿರಾದೇವಿಯನಪ್ಪುವ ತೋಳು ತೋಳು ತೋಳು | ಕಂದ ಹರಿ ತೋಳನ್ನಾಡೈ ಇಂ- ತೆಂದು ಗೋಪೀದೇವಿ ತೋಳನ್ನಾಡಿಸೆ ಪು- ರಂದರವಿಠಲ ಗೋಪಾಲಕೃಷ್ಣ ಆಡಿದ