ಅಂಬೆಗಾಲಿಕ್ಕುತಲಿ ಬಂದ ಗೋವಿಂದ ।
ತುಂಬಿಗುರುಳರಳೆಲೆಯ ನೊಸಲಲೊಲೊಯುತ |
ರಂಭೆ ಗೋಪಿಯಿದ್ದೆಡೆಗೆ ಬಂದು
ಉಂಬೆನಾನಮ್ಮೆಯನು ಎನುತಚ್ಯುತ।
ತುಂಬಿದೊಳಗಣ್ಣ ಜಗಂಗಳ ಹೊಟ್ಟೆಯ |
ತುಂಬುವನ ತಾತ ನಗುತ ನಲಿಯುತ |
ನಂಬಿದವರ ಪೊರೆವ ಭಕುತರ ಕು |
ಟುಂಬ ಪುರಂದರವಿಠಲ ಗೋಪಾಲಕೃಷ್ಣ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಕೃಷ್ಣಲೀಲೆ