ಕೀರ್ತನೆ - 1113     
 
ಕನ್ನಡಿಯಂತೆ ಕೋರೈಸುತಿಹ | ರನ್ನದಾಕರದ ರಾಜಾಂಗಣದಲ್ಲಿ | ಘನ್ನ ಮಹಿಮ ಅಂಬೆಗಾಲಿಕ್ಕುತ ಬರುತ | ತನ್ನ ರೂಹನು ಕಂಡು ಸನ್ನೆ ಮಾಡುವ ನಗುವ ಚೆನ್ನವಾಡಲು ನಗುತ ಜೋಯೆಂದಮ್ಮ । ಚಿನ್ನಾಟವಾಡುವ ಹೋಯೆಂದು ಪಾಡುವ । ಎನ್ನ ಮುದ್ದು ಪುರಂದರವಿಠಲರಾಯ | ಚೆನ್ನಿಗ ಚೆಲುವ ಗೋಪಾಲಕೃಷ್ಣ