ಕೀರ್ತನೆ - 1111     
 
ಹೊಡೆಮರಳ ಕಲಿತ ಶ್ರೀಕೃಷ್ಣ ನಾಗರ | ಹೆಡೆಯಂತೆ ತಲೆಯೆತ್ತಲು ಕಲಿತ ಕೃಷ್ಣ | ನುಡಿಯ ಕಲಿತ ಉಗ್ಗು ಉಗ್ಗು ಎಂದು ಕೃಷ್ಣ | ಉಡಿಗಂಟೆ ಹುಲಿಯುಗುರರಳೆಲೆ ಮಾಗಾಯಿ । ಕಡಗ-ಕಂಕಣದಿಂದ ಮುದ್ದು ಮೆರೆವ ಕೃಷ್ಣ । ಮಡದಿಯರೆತ್ತಿ ಮುದ್ದಾಡಿಸಲವರ ಓ-। ರುಡೆಯ ಮೇಲೆದ್ದು ಕುಣಿವನು ಕೃಷ್ಣ । ಹಿಡಿ ಹೊನ್ನು ಗುಬ್ಬಿ ತಾ ಹೊನ್ನ ಗುಬ್ಬಿಯ ನಾಡಿ | ಜಡಿದು ಚಪ್ಪಾಳೆಯಿಕ್ಕುವನು ಕೃಷ್ಣ । ಮೃಡಮುಖ್ಯ ಸುರರು ಅಂಬರದಲಿ ನೋಡಿ ನೋಡಿ | ಕಡುವೊಪ್ಪಿ ತುತಿಸಿ ಹಾರೈಸುತಿರೆ | ಕಡೆಗಣ್ಣಿನಿಂದವರ ನೋಡಿ ನಲಿವ ನಮ್ಮ | ಒಡನಾಡಿ ಪುರಂದರವಿಠಲ ಗೋಪಾಲಕೃಷ್ಣ