ಕೀರ್ತನೆ - 1108     
 
ಮಲ್ಲಿಗೆ ಮೊಗ್ಗುಗಳಂತೆ । ಹಲ್ಲು ಬಂದಿದೆ ರಂಗಯ್ಯಗೆ | ಹಲ್ಲು ಬಂದಿದೆ ಕೃಷ್ಣಯ್ಯಗೆ | ಎಲ್ಲೋ ಎಲ್ಲೋ ಬಾಯಿದೆರೆಯೆನೆ ಎಲ್ಲ ಬೊಮ್ಮಾಂಡಗಳನೆ ತೋರಿದ ಎಲ್ಲರಂತೆ ಕಂದನಲ್ಲಿವ | ಬಲ್ಲವರಿಗೆ ಪುರಂದರವಿಠಲನು