ಕೀರ್ತನೆ - 1106     
 
ಇದೆ ಇದೆ ಕೈ ಬೆಣ್ಣೆ ಇದೆ ಅಂಗ ಸಿಲುಕಿತ್ತು | ಇದೆ ಇದೆ ಕಟಬಾಯಿಯಿಕ್ಕಿ ಸುರವ ಬೆಣ್ಣೆ | ಇದೆ ಇದೆ ಗೋಪಿದೇವಿ ನಿನ್ನ ಮಗ ಕಳ್ಳನೇ । ಇದೆ ಇದೆ ಹಿಡಿದು ತಂದೆವು ನೋಡೆ ನೋಡೆ | ಹದುಳದಿಂದಿಡೆ ಲೇಸು ಇಲ್ಲದಿದ್ದರೆ ನಿನ್ನ | ತದುವೆ ತದುವೆನಯ್ಯ ಪುರಂದರವಿಠಲ