ಕೀರ್ತನೆ - 1105     
 
ಬೆಣ್ಣೆ ಬಲದೊಡೆಯ ಮೇಲಿಟ್ಟುಕೊಂಡು | ಅಣ್ಣ ಬಲರಾಮನ ಕೂಡಿಕೊಂಡು | ಚೆನ್ನಾಗಿ ಡೊಗ್ಗಾಲೂರಿ ಮೆಲುವ ಕೃಷ್ಣ । ಅಣ್ಣನ ಒಡಗೂಡಿ ಬರುತಾನೆ ಹಸುಮಗನಂತೆ | ನಿನ್ನ ಮಗನೆ ಇವನು ಕೇಳಲೆ ಗೋಪಿದೇವಿ | ಸಣ್ಣವನಿವನೇನೆ ಕಣ್ಣು ಬಿಡುವನೆ ಪುರಂದರವಿಠಲ