ಕೀರ್ತನೆ - 1104     
 
ಎಲೆ ಎಲೆ ಸಿಡಿಲು ಮಿಂಚೆ ಗರ್ಜಿಸದಿರಿ ಎಲೆ ಎಲೆ ಮೇಘರಾಜ ಮಳೆಗರೆಯದಿರು | ಎಲೆ ಎಲೆ ಭೂದೇವಿ ನವರತುನಗಳಿಂದ ನೆಲೆ ಕಟ್ಟಿ ಕಟ್ಟಿಕೊಂಡು ಥಳಿಥಳಿಸುತಲಿರು | ಹುಲಿಯುಗುರು ಅರಳೆಲೆ ಮಾಗಾಯಿ ಕಂಕಣ | ಘಲು ಘಲು ಘುಲುಕೆಂಬೊ ಕಾಲಪೆಂಡೆಯನಿಟ್ಟು ! ಬಲರಾಮ ಪುರಂದರವಿಠಲ ಗೋಪಾಲಕೃಷ್ಣ | ನಲಿಯುತ ಅಂಬೆಗಾಲನಿಕ್ಕಿ ಬರುತ್ತಾರೆ