ಕೀರ್ತನೆ - 1101     
 
ಇದೆ ಇದೆ ಕೈಬೆಣ್ಣೆ, ಇದೊ ಅಂಗೈ ಸಿಕ್ಕಿತು । ಇದೆ ಇದೆ ಕಟಬಾಯಿ ಇದೇ ಸುರಿಯು ಬೆಣ್ಣೆ | ಇದೆ ಇದೆ ಗೋಪೀದೇವಿ ನಿನ್ನ ಮಗನು ಕಳ್ಳ । ಇದೆ ಇದೆ ಹಿಡಿದು ತಂದೆವು ನೋಡೇ । ಹದುಳದಿಂದಿಡೆ ಲೇಸು ಇಲ್ಲದಿದ್ದರೆ ನಿನ್ನ | ತದುಕಿ ಬಿಡುವೆನಯ್ಯ ಪುರಂದರವಿಠಲ