ಕೀರ್ತನೆ - 1099     
 
ಮಲ್ಲಿಗೆ ಮೊಗ್ಗೆಗಳಂತೆ ಹಲ್ಲು ಬಂದಿವೆ ಸಿರಿಕೃಷ್ಣಯ್ಯಗೆ । ಎಲ್ಲಿ ಎಲ್ಲಿ ಬಾಯ ತೆರೆಯೊ ಎನೆ ಎಲ್ಲ ಬೊಮ್ಮಾಂಡವ ಕಂಡೆ | ಎಲ್ಲರಂಥ ಕಂದನಲ್ಲಿವ | ಬಲ್ಲವರಿಗೆ ಪುರಂದರವಿಠಲನು | ಜಗದ ಪಾಲಕನು, ಹಲ್ಲು ಬಂದಿವೆ