ಎಲೆ ಎಲೆ ಸಿಡಿಲೆ ಮಿಂಚೆ ಗರ್ಜಿಸದಿರಿ ನೀವು !
ಎಲೆ ಎಲೆ ಮೇಘರಾಜಾ, ಮಳೆಗರೆಯದಿರು |
ಎಲೆ ಎಲೆ ಭೂದೇವಿ, ನವರತುನಗಳಿಂದ 1
ನೆಲೆ ಕಟ್ಟಿ ಕಟ್ಟಿಕೊಂಡು ಥಳಥಳಿಸುತಲಿರು |
ಹುಲಿಯುಗುರ ಅರಳೆಲೆ ಮಾಗಾಯಿ ಕಂಕಣ |
ಘಲು ಘಲು ಘಲುಕೆಂಬ ಕಾಲಪೆಂಡೆಯನಿಟ್ಟು |
ಬಲರಾಮ ಪುರಂದರವಿಠಲ ಗೋಪಾಲಕೃಷ್ಣ |
ನಲಿಯುತ ಅಂಬೆಗಾಲನಿಕ್ಕುತ ಬರುತಾರೆ