ಕೀರ್ತನೆ - 1096     
 
ಕಾವ ದೈವವು ನೀನೆ ಕೊಲುವ ದೈವವು ನೀನೆ ಕೈವಲ್ಯ ಫಲದಾತ ಕೇಶವನು ನೀನೆ ಆವ ದೈವಕ್ಕೂ ಈ ವೈಭವವನ್ನು ಕಾಣೆ ರಾವಣಾಂತಕ ಸ್ವಾಮಿ ಪುರಂದರವಿಠಲ.