ಕೀರ್ತನೆ - 1095     
 
ನಾರದಮುನಿ ನಮ್ಮ ನೆನೆವನಲ್ಲದೆ ನಾಡುಗಳೆಷ್ಟು ಕೊಟ್ಟನು ಹೇಳಯ್ಯ? ಪ್ರಹ್ಲಾದನು ನಿನಗೆ ಏನು ಕೊಟ್ಟನು ಸ್ವಾಮಿ? ನಾನೇನು ಕೊಡದೆ ಹೋದೆನು ಹೇಳಯ್ಯ? ಅಂದಿನವರಿಗೆ ನೀನು ಏನಾದರೂ ಕೊಟ್ಟದ್ದು ಇಂದೇನು ದೊರಕದೆ ಹೋಯಿತೆ ? ಅಂದು ನೀ ಸಿರಿವಂತನೆ-ಇಂದು ನೀ ಬಡವನೆ? ಇದು ಏನು ವಿಚಿತ್ರ ಪುರಂದರವಿಠಲ!