ಕೀರ್ತನೆ - 1094     
 
ಹೊಲೆಯ ಬಂದಾನೆಂದು ಒಳಗೆ ದೇವರಮಾಡಿ ಗಣ ಗಣ ಗಂಟೆಯ ಬಾರಿಸುವದೇತಕಯ್ಯ ತನುವಿನ ಕೋಪ ಹೊಲೆಯಲ್ಲವೆ? ಹೊರಗಿದ್ದ ಹೊಲೆಯನ ಒಳಗೆ ಬಚ್ಚಿಟ್ಟುಕೊಂಡು ಇದಕೇನು ಮದ್ದು ಶ್ರೀಪುರಂದರವಿಠಲ.