ಕೀರ್ತನೆ - 1093     
 
ಎಲ್ಲಾ ಒಂದೇ ಎಂಬುವರ ಎರಡು ದಾಡಿಯಲಿದ್ದ ಹಲ್ಲುದುರೆ ಬಡಿಯಬೇಕು ಹರಿಭಕ್ತರಾದವರು ಸಲ್ಲದು ಸಲ್ಲದು ಈ ಮಾತು ಇದಕೆ ಸಂಶಯಬೇಡ ಕಲ್ಲು (ಕಲ್ಲ) ನಾರಿಯ ಮಾಡಿದ ಪುರಂದರವಿಠಲನ | ಪಲ್ಲವಾಂಘ್ರಿಯ ನೆನೆದು ಪರಗತಿಯ ಪಡೆಯಿರೊ.