ಕೀರ್ತನೆ - 1092     
 
ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೊ ಹರಿಯ ಕರುಣದಲಾದ ಭಾಗ್ಯವ ಹರಿ ಸಮರ್ಪಣೆ ಮಾಡಿರೊ ಸಿರಿಪುರಂದರವಿಠಲರಾಯನ ಚರಣಕಮಲವ ನಂಬಿ ಬದುಕಿರೊ.