ಕೀರ್ತನೆ - 1090     
 
ಧರ್ಮಪಥವ ಮೆಟ್ಟಲು ಮನವೆರಗದು ದುಷ್ಕರ್ಮಕಾದಡೆ ಚಿಗಿಚಿಗಿದಾಡುವುದು ಯುಗಧರ್ಮವೋ (ಇದು) ಹರಿ(ಯೆ), ಜೀವನ ಕರ್ಮವೊ ದುರ್ಮಾಯ ಯುಕ್ತಿಯಿಂದ ಚರಿಸುವ (ವರ) ಜನರ ಮೈಯ ಚರ್ಮವ ಸುಲಿಸದೆ ಬಿಡನೊ ಪುರಂದರವಿಠಲ.