ಕೀರ್ತನೆ - 1088     
 
ಬೇಡುವ ಕಷ್ಟಕ್ಕಿಂತ ಸಾವುದೆ ಕರಲೇಸು ಬೇಡುವವರಿಗೆ ಒಬ್ಬರೊಡೆಯರುಂಟೆ ದೇವ ಗೂಡ ಕಿರಿದು ಮಾಡಿ ಬಲಿಯ ದಾನವ ಬೇಡಿ ನಾಡೊಳು ಸ್ಥೂಲ ಸೂಕ್ಷ್ಮ ರೂಪವಾದೆ ಬೇಡುವ ಕಷ್ಟವನು ನೀನೆ ಬಲ್ಲೆಯೋ ಸ್ವಾಮಿ ಎನ್ನ ಬೇಡದಂತೆ ಮಾಡಯ್ಯ ಪುರಂದರವಿಠಲ.