ಕೀರ್ತನೆ - 1083     
 
ಮನವೇಕೇಳು ಮಾಮನೋಹರನ | ಮನಸಿಜಪಿತನ ನಾನನುದಿನದಲಿ ಅಗಲದಿಪ್ಪೆ | ಘನಮಹಿಮ ದೇವರನನು ನೆನೆವುದೇನು ನೇಹಮಾಡಿದವನ | ಮನವನೀಯೆ ತನ್ನ ನೀವನು ಆ । ದನುಜ ಮನುಜ ದಿವಿಜರೊಡೆಯಗೆ | ತನುವ ಪ್ರಾಣ ವೊಪ್ಪಸುವನನು | ಅನುದಿನದಲಿ ಪೊರೆವನು ಪುರಂದರವಿಠಲ। ನೆನೆವುದೇನು ನೇಹ ಮಾಡಿದವನ