ಎನ್ನ ಹೃದಯದಲ್ಲಿ ಎಲ್ಲಿ ಅನುವನೀಯಲೊ ಹರಿಯೆ? ।
ಎನ್ನಭಾವದಲ್ಲಿ ಎಲ್ಲಿ ಅನುವನೀಯಲೊ ಹರಿಯೆ? ।
ಬರಿದೆ ಸುಕೃತದ-ದುಷ್ಕೃತದ ಬನ್ನ ಬಡಿಸಿ ನೀ ನೋಡುತಿಹರೆ !
ಎನ್ನ ಅವಗುಣಗಳೆಣಿಸುವರೆ ಕಡೆಯುಂಟೆ? ।
ನಿನ್ನ ಘನತೆಯ ನೋಡಿ ಪಾಲಿಸೆಲೊ ಹರಿಯೆ ।
ಎನಗನ್ಯಥಾ ಗತಿಯಿಲ್ಲ ಅನಾಥ ನಾನಯ್ಯ |
ಅನಾಥ ಬಂಧು ಪುರುಂದರವಿಠಲರಾಯ
ನಿನ್ನ ಡಿಂಗರಿಗನೆನಿಸೊ ಕೃಪಾಂಬುಧಿಯೆ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ತತ್ತ್ವ ಜ್ಞಾನ