ಕೀರ್ತನೆ - 1079     
 
ಹರಿಭಕುತಿಯೆಂಬ ಸುಧೆಯ ಸಾಗರವಿದೆ | ಅರಿವರೆ ವಿಷವೆಂಬ ಎಳೆ ಕೊಳಚೆಯನೀರ? । ಎಲೆ ಎಲೆ ಮನವೆ ಜಲರುಹಾಕ್ಷನ ನೆನೆ । ಎಲೆ ಎಲೆ ಮನವೆ ಬಿಸರುಹಾಕ್ಷನ ನೆನೆ ಮರಳಿ ಮರಳಿ | ಸಂಸಾರವನೈದುವರೆ ಪುರಂದರವಿಠಲ ವಿಶ್ವೇಶ್ವರನೆಂದು ನೆನೆ ಎಲೆ ಎಲೆ ಮನವೆ