ಕೀರ್ತನೆ - 1075     
 
ಶರಧಿ ಸಡ್ಡಿಯ ಮಾಡಿ ಧರೆಯ ಕೂರಿಗೆ ಮಾಡಿ ಹರ ಬೊಮ್ಮರೆಂಬ ಎರಡೆತ್ತು ಹೂಡಿ ನರಜೀವರಾಶಿಗಳೆಂಬ ಬೀಜವತಕ್ಕೊಂಡು ಧರೆಯಲ್ಲಿ ಬಿತ್ತುವಾತ ಇಂದ್ರನು, ಬೆಳೆಸುವಾತ ಚಂದ್ರನು | ಕಳೆಯ ಕೀಳುವನು ಯಮರಾಜನಯ್ಯ ಬಿತ್ತಿದಾತನೆ ಬೆಳೆಯನು ಒತ್ತಿಕೊಂಡು ಹೋಗುವಾಗ ದುಃಖವೇತಕೆ ಸಿರಿಪುರಂದರವಿಠಲ.