ಕೀರ್ತನೆ - 1072     
 
ಕಮಲಜನು ನಿನ್ನ ಪಾದಕಮಲವನು ತೊಳೆದಿಹನು ಉಮಾಪತಿಯು ನಿನ್ನ ಪಾದಜಲವ ಪೊತ್ತಿಹನು ಯಮಜ ಮಾಡುವ ರಾಜಸೂಯಾಗದಲ್ಲಿ ಮಮಕರಿಸಿದೆ ಎಂತೊ ಕಾಲ ತೊಳೆವ ಊಳಿಗವ ? ಮಮಪ್ರಾಣಾ ಹಿ ಪಾಂಡವಾಃ ಎಂಬ ಬಿರುದಿಗಾಗಿ ನಮೋ ನಮೋ ಎಂಬೆ ಪುರಂದರವಿಠಲ.