ಕೀರ್ತನೆ - 1071     
 
ಇದೇ ಮುನಿಗಳ ಮನದ ಕೊನೆಯ ಠಾವು ! ಇದೇ ಬ್ರಹ್ಮಾದಿಗಳ ಹೃತ್ಕಮಲಪೀಠ । ಇದೇ ದ್ವಾರಕೆ ಇದೇ ಕ್ಷೀರಾಂಬುಧಿ ಇದೇ ಅರಿದ ಸುಜ್ಞಾನಿಗೆ ವೈಕುಂಠ ಇದೇ ಪುರಂದರವಿಠಲನ ಮಂದಿರ.